ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಕಂಪಿಸಿದೆ ಕಂಪನದ ತೀವ್ರತೆ 5.7 ತೀವ್ರತೆ ದಾಖಲಾಗಿದೆ.
ಇಂದು ಶನಿವಾರ ಭೂಕಂಪನ ಸಂಭವಿಸಿದೆ. ಆದರೆ ಯಾವುದೇ ಪ್ರದೇಶದಲ್ಲಿಯೂ ಸಾವು ನೋವು, ಆಸ್ತಿ ಹಾನಿ ಬಗ್ಗೆ ವರದಿಗಳಾಗಿಲ್ಲ.
‘ಶನಿವಾರ ಬೆಳಗ್ಗೆ 9.45 ಗಂಟೆಗೆ ಮಧ್ಯಮ ತೀವ್ರತೆಯ ಕಂಪನ ಸಂಭವಿಸಿದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಫ್ಗಾನಿಸ್ತಾನ-ತಜಕಿಸ್ತಾನ್ ಗಡಿಯ, 181 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರತಿಸಲಾಗಿದೆ.
PublicNext
05/02/2022 01:13 pm