ಹಾವು- ಮುಂಗುಸಿ ಕಡುವೈರಿಗಳು. ಇವುಗಳು ಕಾದಾಟಕ್ಕೆ ಇಳಿದರೆ ಸೋಲುವುದು ಹಾವೇ. ಕಾದಾಟ ನಡೆಯುವಾಗ ಮುಂಗುಸಿ ಹಾವಿನಿಂದ ಕಚ್ಚಿಸಿಕೊಂಡರೂ ಸಾಯುವುದಿಲ್ಲ. ಹಾವನ್ನು ಕೊಂದ ನಂತರ ಮುಂಗುಸಿಯು ಕಾಡುಗಳಲ್ಲಿ ಯಥೇಚ್ಛವಾಗಿ ಬೆಳೆಯವ ಯಾವುದೋ ಒಂದು ಮರದ ಎಲೆಯನ್ನು ತಿನ್ನುತ್ತದೆ ಹಾಗಾಗಿ ಅದರ ದೇಹದಲ್ಲಿ ವಿಷ ಹಬ್ಬುವುದಿಲ್ಲು ಎಂದು ಗ್ರಾಮೀಣ ಭಾಗಗಳಲ್ಲಿ ಜನ ಹೇಳುತ್ತಾರೆ.
ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಮುಂಗುಸಿಗಳು ರೂಪಾಂತರಿತ ಕೋಶಗಳನ್ನು ಹೊಂದಿರುತ್ತವೆ. ಅವು ಮಂಬಾಸ್‌ನ ನ್ಯೂರೋಟಾಕ್ಸಿನ್‌ಗಳನ್ನು ತಮ್ಮ ರಕ್ತವಾಹಿನಿಗೆ ಪ್ರವೇಶಿಸುವುದನ್ನು ತಡೆಯುತ್ತವೆ. ಹಾಗಾಗಿ ವಿಷಕಾರಿ ಹಾವು ಮಾರಣಾಂತಿಕವಾಗಿ ಕಚ್ಚಿದರೂ ಬದುಕುಳಿಯುವ ಸಾಮರ್ಥ್ಯ ಮುಂಗುಸಿ ಪಡೆದಿರುತ್ತದೆ.
ಹಾವು- ಮುಂಗುಸಿಗಳ ನಡುವೆ ನಡೆಯವ ಕಾಳಗ ಭೀಕರವಾಗಿರುತ್ತದೆ. ಮುಂಗುಸಿಯನ್ನು ನೋಡಿದ ಕೂಡಲೇ ಹಾವು ಹೆದರುತ್ತಾದರೂ ತಪ್ಪಿಸಿಕೊಳ್ಳಲಾಗದ ಸಂದರ್ಭದಲ್ಲಿ ಪ್ರಾಣ ಹೋಗುವವರೆಗೂ ಹೋರಾಡುತ್ತದೆ.
PublicNext
29/01/2022 08:04 am