ಚಿಕ್ಕಮಗಳೂರು: ಹಲವಾರು ದಿನಗಳಿಂದ ಭಯ ಹುಟ್ಟಿಸಿದ್ದ ಚಿರತೆಯು ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಸೆರೆಸಿಕ್ಕು ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯ ಕಡೂರು ತಾಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ಕೆಲ ತಿಂಗಳಿಂದ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದ ಚಿರತೆಯಿಂದ ಜನ ಕಂಗಾಲಾಗಿದ್ದರು.ಗ್ರಾಮದ ಕೆರೆಯ ಸಮೀಪ ಬೋನ್ ಗೆ ನಾಯಿ ಬಿಟ್ಟು ಚಿರತೆ ಸೆರೆಗೆ ಅರಣ್ಯಾಧಿಕಾರಿಗಳು ಪ್ಲಾನ್ ಮಾಡಿದ್ದರು ಅದರಂತೆ
ಕೊನೆಗೂ ಎಂಟು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಸೆರೆಹಿಡಿದ ಚಿರತೆಯನ್ನು ಭದ್ರಾ ಅಭಯಾರಣ್ಯಕ್ಕೆ ಅರಣ್ಯ ಸಿಬ್ಬಂದಿಗಳು ಬಿಟ್ಟಿದ್ದಾರೆ.
PublicNext
24/01/2022 10:03 am