ಕೀನ್ಯಾ: ಆನೆಗಳು ಅವಳಿ ಮರಿಗಳಿಗೆ ಜನ್ಮ ನೀಡುವುದು ಬಹಳ ಅಪರೂಪ. ಕೀನ್ಯಾದ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಇತ್ತೀಚೆಗೆ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಮುದ್ದಾಗಿರುವ ಈ ಎರಡು ಗಂಡು ಮರಿಗಳು ತಾಯಿಯ ಸುತ್ತಮುತ್ತಲೇ ಓಡಾಡಿಕೊಂಡಿರುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹಡಿದಾಡುತ್ತಿವೆ.
ಉದ್ಯಾನವನದ ಅದ್ಭುತ ಪರಿಸರ ಶಿಬಿರದ ಮಾರ್ಗದರ್ಶಕರು ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದ ದೃಶ್ಯವನ್ನು ಗಮನಿಸಿದ್ದಾರೆ. ಯುಕೆ ಮೂಲದ ಚಾರಿಟಿ ಸೇವ್ ದಿ ಎಲಿಫೆಂಟ್ಸ್ ಸೆರೆ ಹಿಡಿದ ವಿಡಿಯೋದಲ್ಲಿ ಆನೆ ಬೋರಾ ತನ್ನ ಅವಳಿ ಮಕ್ಕಳ ಜೊತೆಗೆ ಕಾಣಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಈ ಎಲ್ಲ ಮೂರು ಆನೆಗಳಿಗೆ ದೌಡ್ ಎಂಬ ಸಲಗ ರಕ್ಷಕನಾಗಿ ನಿಂತ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
PublicNext
23/01/2022 07:56 pm