ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ಯ್ಲಾಕ್ & ವೈಟ್ ಗೂಳಿ ಗುದ್ದಾಟ, ವೈರಲ್ ಆದ ವೀಡಿಯೋ

ವಿಜಯಪುರ: ಕಪ್ಪು-ಬಿಳುಪು ಬಣ್ಣಗಳುಳ್ಳ ಗೂಳಿಗಳು ನಡುರಸ್ತೆಯಲ್ಲೇ ಮದಗಜಗಳಂತೆ ಪರಸ್ಪರ ಗುದ್ದಾಡಿರುವ ವೀಡಿಯೋ ಒಂದು

ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಲ್‌ ನಲ್ಲಿ ನಡೆದಿದೆ.ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಸ್ತೆಯ ಮಧ್ಯದಲ್ಲೇ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆಸಿದ ಗೂಳಿಗಳು ನಿರಂತರ ವಾಹನ ಸಂಚಾರಗಳಿದ್ರೂ ಲೆಕ್ಕಿಸದೆ ಪರಸ್ಪರ ಹೋರಾಟ‌ ನಡೆಸಿವೆ.ವಾಹನ ಸವಾರರು ಹಾರ್ನ್ ಮಾಡಿದ್ರೂ, ರಸ್ತೆ ಮೇಲಿಂದ ಗೂಳಿಗಳು ಒಂದಿಂಚು ಕದಲಲಿಲ್ಲ ನಂತರ ಗೂಳಿಗಳ ಕಾದಾಟ ಕಂಡು ಜನರೇ ರಸ್ತೆ ಬದಿಯಿಂದ ಸಂಚರಿಸಿದ್ದಾರೆ.

ಮದವೇರಿದ ನ್ಯಾಚುರಲ್ ಗೂಳಿ ಕಾಳಗವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಜನರು ವೀಕ್ಷಿಸಿ ಹೌಹಾರಿದ್ದಂತು ನಿಜ.

Edited By : Shivu K
PublicNext

PublicNext

21/01/2022 03:45 pm

Cinque Terre

65.69 K

Cinque Terre

1

ಸಂಬಂಧಿತ ಸುದ್ದಿ