ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಝೂ ಅಲ್ಲಿ‌ ಗೊರಿಲ್ಲಾಗಳದ್ದೇ ಕಾರುಬಾರು

ಮೈಸೂರು: ಐತಿಹಾಸಿಕ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಮತ್ತೊಂದು ಹಿರಿಮೆಯ ಗರಿ ಮೂಡಿದೆ. ಗೊರಿಲ್ಲಾಗಳನ್ನು ಹೊಂದಿರುವ ದೇಶದ ಏಕೈಕ ಮೃಗಾಲಯವಾಗಿ ಮೈಸೂರು ಝೂ ಹೊರಹೊಮ್ಮಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರ್ಚ್ಯುವಲ್ ಮೂಲಕ ಗೊರಿಲ್ಲಾಗಳನ್ನು ಸಾರ್ವಜನಿಕ ವೀಕ್ಷಣೆಗೆ ಲೋಕಾರ್ಪಣೆ ಮಾಡಿದ್ರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಸೇರಿದಂತೆ ಪ್ರಮುಖರು‌ ಈ ಕಾರ್ಯಕ್ರಮದಲ್ಲಿದ್ದರು.

ಅಂದ ಹಾಗೆ, ಸಾರ್ವಜನಿಕರ ಮುಂದೆ ಓಡಾಡುತ್ತಿರುವ ಈ ಗೊರಿಲ್ಲಾಗಳು ಅಣ್ಣ- ತಮ್ಮ. ಅಣ್ಣ ತಾಬೋಗೆ 14 ವರ್ಷ, ತಮ್ಮ ಡೆಂಬಗೆ 8 ವರ್ಷ. ಇಬ್ಬರೂ ಜರ್ಮನಿಯಿಂದ ಬಂದವರು. ಆಗಸ್ಟ್ 19ರಂದೇ ಪ್ರಾಣಿ ವಿನಿಯಮ ನಿಯಮಗಳನ್ವಯ ಜರ್ಮನಿಯ ಆಲ್​ವೆಟರ್ ಮೃಗಾಲಯದಿಂದ ತರಿಸಲಾಗಿತ್ತು. ಆದ್ರೆ ಪ್ರದರ್ಶನಕ್ಕೆ ವಿಶ್ವಮಟ್ಟದ ವಿನ್ಯಾಸವುಳ್ಳ ಸೌಕರ್ಯ ಇರಲಿಲ್ಲ. ಇನ್​ಫೋಸಿಸ್ ಫೌಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು 2.70 ಕೋಟಿ ರೂ. ವೆಚ್ಚದಲ್ಲಿ ಹೊಸ ಗೋರಿಲ್ಲಾ ಮನೆ ನಿರ್ಮಿಸಿಕೊಟ್ಟಿದ್ದರು. ಹೊಸ ಮನೆಯಲ್ಲಿ ತಾಬೊ ಮತ್ತು ಡೆಂಬ ಉತ್ಸಾಹದಿಂದ ಓಡಾಡಿಕೊಂಡಿವೆ.

ಮೈಸೂರು ಝೂ 1977ರಲ್ಲೇ ಒಂದು ಜೊತೆ ಗೊರಿಲ್ಲಾ ತರಿಸಿಕೊಂಡಿತ್ತು. 1995ರಲ್ಲಿ ಪೋಲೋ ಹೆಸರಿನ ಸಿಲ್ವರ್ ಬ್ಯಾಕ್​ ಗೊರಿಲ್ಲಾ ಬಂದಿತ್ತು. 2014ರಲ್ಲಿ ವಯೋಸಹಜ ಕಾರಣಗಳಿಂದ ಪೋಲೋ ಮೃತಪಟ್ಟಿದ್ದ. ಬಳಿಕ ಇಡೀ ದೇಶದಲ್ಲಿ ಗೊರಿಲ್ಲಾ ಇರಲಿಲ್ಲ. ಈಗ ಪಶ್ಚಿಮ ತಗ್ಗುಪ್ರದೇಶದ ತಾಬೊ ಮತ್ತು ಡೆಂಬ ಮೈಸೂರಿಗೆ ಬಂದಿದ್ದಾರೆ. ಇಬ್ಬರೂ ತಮ್ಮ ಚಲನವಲನಗಳ ಮೂಲಕ ಪ್ರವಾಸಿಗರಿಗೆ ಖುಷಿ ನೀಡುತ್ತಿದ್ದಾರೆ.

Edited By : Shivu K
PublicNext

PublicNext

29/12/2021 06:39 pm

Cinque Terre

90.11 K

Cinque Terre

0