ಅಸ್ಸಾಂ: ಮಗುವನ್ನೇ ಹೋಲುವ ಮರಿಯೊಂದಕ್ಕೆ ಮೇಕೆ ಜನ್ಮ ನೀಡಿದೆ. ಅಚ್ಚರಿ ಎನಿಸಿದರೂ ಇದು ಸತ್ಯ. ಈ ಘಟನೆ ಅಸ್ಸಾಂನ ಕಛರ್ ಜಿಲ್ಲೆಯ ಗಂಗಾಪುರ ಗ್ರಾಮದಲ್ಲಿ ನಡೆದಿದೆ.
ಈ ಮರಿಗೆ ಮನುಷ್ಯರಂತೆಯೇ ಎರಡು ಕಣ್ಣು, ಮೂಗು, ಬಾಯಿ ಇದೆ. ಹಾಗೂ ಅದರ ಮುಖ ಕೂಡ ಮಗುವಿನಂತೆಯೇ ಇದೆ.ಇದು ಸ್ಥಳೀಯ ಜನರಲ್ಲಿ ಅಚ್ಚರಿ ಮೂಡಿಸಿದೆ. ಆದ್ರೆ ಇದರ ಕಿವಿ ಮೇಕೆಯಂತೆ ಇದ್ದು, ಮುಂಭಾಗದ ಎರಡು ಕಾಲುಗಳನ್ನಷ್ಟೇ ಇದು ಹೊಂದಿದೆ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಈ ವಿಸ್ಮಯವನ್ನು ನೋಡಲು ಗ್ರಾಮಕ್ಕೆ ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.
PublicNext
28/12/2021 05:56 pm