ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳಿ ತಾಳದೇ ಅಡುಗೆ ಮನೆಗೆ ನುಗ್ಗಿದ ಕಾಳಿಂಗ ಸರ್ಪ

ಶಿವಮೊಗ್ಗ: ಪ್ರಾಣಿ-ಪಕ್ಷಿಗಳು ಚಳಿಯನ್ನು ಹೇಗೋ ಸಹಿಸಿಕೊಂಡಿರುತ್ತವೆ. ಆದರೆ ಸರೀಸೃಪಗಳು ಈ ಕೊರೆವ ಚಳಿಯನ್ನು ಸಹಿಸಿಕೊಳ್ಳಲು ಹೇಗೆ ಸಾಧ್ಯ?

ಹೀಗಾಗಿ ಕಾಳಿಂಗ ಸರ್ಪವೊಂದು ಮನೆಗೆ ನುಗ್ಗಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೆಸರೆ ಗ್ರಾಮದಲ್ಲಿ ನಡೆದಿದೆ. ಸಮೀಪದ ಕೊಡ್ಲುಕೊಪ್ಪ ಮಂಜಪ್ಪ ಅವರ ಮನೆಯ ಅಡುಗೆ ಕೋಣೆಗೆ ನುಸುಳಿದ ಕಾಳಿಂಗ ಬೆಚ್ಚನೆ ಜಾಗ ನೋಡಿ ರೆಸ್ಟ್ ಮಾಡಿದೆ. ಅಚಾನಕ್ಕಾಗಿ ಹಾವು ಕಂಡ ಮಂಜಪ್ಪ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಆಗುಂಬೆ ಮಳೆಕಾಡಿನ ಉರಗ ತಜ್ಞ ಅಜಯಗಿರಿ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಜಯಗಿರಿ ಅವರು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

Edited By : Shivu K
PublicNext

PublicNext

26/12/2021 11:12 am

Cinque Terre

49.62 K

Cinque Terre

0