ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊಕ್ಕಳ್ಳಿ ಗ್ರಾಮದಲ್ಲಿ ಹುಲಿ ದಾಳಿ ಮಾಡಿದೆ. ಗ್ರಾಮದ ಜಾನುವಾರುಗಳನ್ನೂ ತಿಂದು ಮುಗಿಸುತ್ತಿದೆ.
ಬಾನಳ್ಳಿ, ಭಾರತೀಬೈಲ್, ಸಬ್ಬೇನಹಳ್ಳಿ ಸುತ್ತಮುತ್ತ ಹುಲಿ ಸಂಚಾರ ಹೆಚ್ಚಾಗಿದೆ. ಈಗಾಗಲೇ ಇಲ್ಲಿಯ 50ಕ್ಕೂ ಹೆಚ್ಚು ಜಾನುವಾರುಗಳನ್ನ ಹುಲಿ ತಿಂದು ಹಾಕಿದೆ.
ಹುಲಿಯ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕವೂ ಮನೆ ಮಾಡಿದೆ. ಮಂಜುನಾಥ್ ಎಂಬುವವರ ಹಸುವನ್ನು ಹುಲಿ ಕೊಂದು ತಿಂದು ಹಾಕಿದೆ.
ಹುಲಿಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸುತ್ತಲೇ ಇದ್ದಾರೆ.
PublicNext
22/12/2021 09:40 am