ಆಂಧ್ರಪ್ರದೇಶ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ನಿಷೇಧದ ನಡುವೆಯೂ ಕೋಳಿ ಕಾದಾಟಕ್ಕೆ ತರಬೇತಿ ಭರ್ಜರಿಯಾಗೇ ನಡೆಯುತ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಇದೆ. ಅದಕ್ಕೆ ಈಗಾಗಲೇ ಹುಂಜಗಳಿಗೆ ತರಬೇತಿಯೂ ಶುರುವಾಗಿದೆ. ವಿಶೇಷ ಏನಂದ್ರೆ ಈ ಬಾರಿ ಕೋಳಿ ಕಾಳಗಕ್ಕೆ ಹೈಟೆಕ್ ಟಚ್ ಸಿಕ್ತಿದೆ. ಹೌದು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡ್ತಿರೋ ಹಲವಾರು ಮಂದಿ ಹಾಗೂ ಸ್ನಾತ್ತಕೋತ್ತರ ಪದವೀಧರರ ಗುಂಪು ಸೀಸನಲ್ ಪ್ರೊಫೆಷನ್ ಆಗಿ ಹುಂಜಗಳನ್ನು ಸಾಕುವುದು ಅವುಗಳಿಗೆ ಟ್ರೈನಿಂಗ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೈಯಲ್ಲಿ ಮೌಸ್ ಹಿಡಿದುಕೊಂಡು ಲ್ಯಾಪ್ಟಾಪ್ , ಕಂಪ್ಯೂಟರ್ನಲ್ಲಿ ಕೆಲಸ ಮಾಡಬೇಕಾದವರು ಈಗ ಹುಂಜ ಹಿಡಿದುಕೊಂಡು ಅದನ್ನ ಪಳಗಿಸುವ ಕೆಲಸ ಶುರು ಮಾಡಿಕೊಂಡಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ತಂದು ಕೊಡುವುದರಿಂದ ಈ ಕೆಲಸಕ್ಕೆ ಕೈಹಾಕಿದ್ದಾರೆ. ಕೋಳಿ ಕಾಳಗವನ್ನು ಹೈಕೋರ್ಟ್ ನಿಷೇಧಿಸಿದೆ. ಆದ್ರೂ ಬಹಿರಂಗವಾಗೇ ಕೋಳಿ ಕಾಳಗ ನಡೆಯುತ್ತಾ ಬಂದಿದೆ. ಈ ವೇಳೆ ಸುಮಾರು 100 ಕೋಟಿಗೂ ಅಧಿಕ ಮೊತ್ತದ ಬೆಟ್ಟಿಂಗ್ ಕೂಡಾ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
PublicNext
18/12/2021 07:46 am