ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಆನೆಯ ಪುಂಡಾಟ, ಭಯಭೀತರಾದ ಜನರು

ಮೈಸೂರು.ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿ ಕಾಡಾನೆಯ ರೌದ್ರಾವತಾರ‌ ಕಂಡುಬಂದಿದೆ.

ಸುಮಾರು ಎರಡು ಗಂಟೆಗಳ ಕಾಲ ವಾಹನ ಸವಾರರಿಗೆ ಉಪಟಳ ಕೊಟ್ಟಿರುವ ಘಟನೆ ತಾಲೂಕಿನ ಗುರುಪುರ ಟಿಬೆಟ್ ಕ್ಯಾಂಪ್‌ ಬಳಿ ನಡೆದಿದೆ.

ಆನೆಯನ್ನು ಕಾಡಿಗಟ್ಟಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.ಈ ಸಂದರ್ಭದಲ್ಲಿ ಆನೆಯತ್ತ ಯಾರೊಬ್ಬ ಬೆಂಕಿ ಎಸೆದಿದ್ದಾನೆ ಇದರಿಂದ

ಸಿಟ್ಟಿಗೆದ್ದ ಆನೆ ಗ್ರಾಮಸ್ಥರತ್ತ ನುಗ್ಗಿ ದಾಂದಲೆ ನಡೆಸಿದೆ. ವಾಹನ ಸವಾರರನ್ನು ಓಡಿಸಿದೆ ಹಾಗೂ ವಿದ್ಯುತ್ ಪ್ರವಹಿಸುತ್ತಿದ್ದ ಕಂಬ ಕಿತ್ತೆಸೆದು ಜನರನ್ನು ಭಯಭೀತಿಗೊಳಿಸಿದೆ.ಒಟ್ಟಿನಲ್ಲಿ ಆನೆಯನ್ನು ಕಾಡಿಗಟ್ಟಲು ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

Edited By : Shivu K
PublicNext

PublicNext

06/12/2021 12:09 pm

Cinque Terre

29.75 K

Cinque Terre

0

ಸಂಬಂಧಿತ ಸುದ್ದಿ