ಚಿಕ್ಕಬಳ್ಳಾಪುರ: ಮೂರು ತಿಂಗಳಿಂದ ನಂದಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.ಇದೀಗ ನಿಷೇಧಾಜ್ಞೆ ಹಿಂಪಡೆದು ಪ್ರವಾಸಿಗರಿಗೆ ಮುಕ್ತವಾಗಿಸಲಾಗಿದೆ.
ನಂದಿಗಿರಿಯ ರಂಗಪ್ಪ ಸರ್ಕಲ್ ಬಳಿ ರಸ್ತೆ ಕುಸಿತವಾಗಿದ್ದರಿಂದ ಸಂಪರ್ಕ ಕಡಿತವಾಗಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ಕೊಟ್ಟಿರಲಿಲ್ಲ.ನಾಳೆಯಿಂದ ಪ್ರವಾಸಿಗರಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ವೀಕೆಂಡ್ ನಲ್ಲಿ ಬುಕ್ಕಿಂಗ್ ಮಾಡೋರಿಗೆ ಮಾತ್ರ ಅವಕಾಶ ನೀಡಲಾಗುವುದು,ಜೊತೆಗೆ ಕೊರೋನಾ ನಿಯಂತ್ರಣದ ಕ್ರಮಗಳ ಬಗ್ಗೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿಕೆ ನೀಡಿದ್ದಾರೆ.
PublicNext
30/11/2021 03:42 pm