ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಇನ್ನೆರಡು ದಿನ ಮಳೆ

ಬೆಂಗಳೂರು: ಚಳಿಗಾಲದಲ್ಲಿಯೂ ಮಳೆಗಾಲ ಶುರುವಾಗಿರುವುದು ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ.ಬೆಳೆದ ಬೆಳೆ ಕೈ ತಪ್ಪಿ ಹೋಗಿದೆ.ಸದ್ಯ ಹವಮಾನ ವರದಿಯ ಪ್ರಕಾರ ರಾಜ್ಯದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಕಡಲ ತೀರದ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಲ್ಲಿ ಮತ್ತೆ ವಾಯುಭಾರ ಕುಸಿತವಾಗಲಿದ್ದು, ಈ ಹಿನ್ನೆಲೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರ ಭಾಗಕ್ಕೆ ಇದು ಎಫೆಕ್ಟ್ ಆಗಲಿದ್ದು, ಕರ್ನಾಟಕಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎನ್ನಲಾಗಿದೆ.

ಇನ್ನು ಈ ಮಳೆ ಬಗ್ಗೆ ಮಾತನಾಡಿರುವ ಹವಮಾನ ತಜ್ಞರಾದಂತ ಡಾ. ಆರ್ ಎಚ್ ಪಾಟೀಲ್, ಇನ್ನು ಎರಡು ದಿನ ಬಿಸಿಲು ಬರುವುದು ಕಡಿಮೆ. ಹೀಗೆ ಮೋಡ ಕವಿದ ವಾತಾವರಣ ಎಲ್ಲೆಡೆ ಇರಲಿದೆ. ಆದ್ರೆ ಮಳೆಯಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

29/11/2021 07:54 pm

Cinque Terre

25.58 K

Cinque Terre

0