ಬೆಂಗಳೂರು: ರಾಜ್ಯದಲ್ಲಿ ಎರಡು ದಿನದಿಂದ ಅಲ್ಲಲ್ಲಿ ಮಳೆಯಾದರೂ ಬಿಸಿಲಿನ ವಾತಾವರಣ ಕಂಡು ಬರ್ತಿದೆ. ಈ ಹಿನ್ನೆಲೆಯಲ್ಲಿ ಜನರು ಮೈ ಮರೆಯೋ ಹಾಗಿಲ್ಲ. ಏಕೆಂದರೆ, ಶನಿವಾರದಿಂದ ಮತ್ತೆ ವರುಣ ತನ್ನ ಆರ್ಭಟ ಮುಂದುವರಿಸ ಲಿದ್ದಾನೆ. ಹೀಗಂತ ಹವಾಮಾನ ಇಲಾಖೆ ಹೇಳುತ್ತಿದೆ.
ರಾಜ್ಯದಲ್ಲಿ ಕಳೆದ ಎರಡು ವಾರ ಕಾಲ ಅಕಾಲಿಕ ಮಳೆ ಸುರಿದು ಸಾಕಷ್ಟು ಅವಾಂತರಗಳಾಗಿವೆ. ಈ ಮಧ್ಯೆ, ಒಂದೆರಡು ದಿನ ಮಳೆರಾಯ ಸ್ವಲ್ಪ ಬಿಡುವು ಕೊಟ್ಟಿದ್ದ. ಆದರೆ, ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಕಾಣುವ ಸಾಧ್ಯತೆ ಇದೆ. ಹೀಗಾಗಿ ಮತ್ತೆ ಮಳೆ ಆರಂಭವಾಗಲಿದೆ.
ನ. 1ರಿಂದ ಈ ತನಕ ರಾಜ್ಯದಲ್ಲಿ ವಾಡಿಕೆಗಿಂತ ಶೇ.270ಕ್ಕಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.330ರಷ್ಟು ಹೆಚ್ಚು ಮಳೆಯಾಗಿದೆ. ಈ ತಿಂಗಳಲ್ಲಿ ಇಷ್ಟೊಂದು ಮಳೆಯಾಗಿರುವುದು ಹೊಸ ದಾಖಲೆಯನ್ನೇ ಬರೆದಿದೆ.
PublicNext
25/11/2021 11:44 am