ಭಟ್ಕಳ: ಮೀನುಗಾರಿಕೆ ಸಂದರ್ಭ ತಿಮಿಂಗಿಲವೊಂದು ಬೋಟ್ ಸಮೀಪದಲ್ಲೇ ಮೀನುಗಾರರಿಗೆ ಕಾಣಿಸಿಕೊಂಡು 'ತನ್ನ ಆಟ' ವನ್ನು ಪ್ರದರ್ಶಿಸಿದೆ.
ಭಟ್ಕಳ ತಾಲೂಕು ಪರಿಸರದ ಸಮುದ್ರದಲ್ಲಿ ಆಳಕಡಲ ಮೀನುಗಾರಿಕೆ ಬೋಟೊಂದು ಬಲೆ ಹಾಕಿ ಚಲಿಸುತ್ತಿದ್ದಾಗ ಬೋಟ್ ಬಳಿಯಲ್ಲಿಯೇ ಈ ಮತ್ಸ್ಯ ಶ್ರೇಷ್ಠನ ದರ್ಶನವಾಗಿದೆ!
ಮೊದಮೊದಲು ಆತಂಕಗೊಂಡ ಮೀನುಗಾರರು, ಬಳಿಕ ಸಾವರಿಸಿಕೊಂಡು ತಿಮಿಂಗಿಲ ಎತ್ತರಕ್ಕೆ ಹಾರಿ, ಬೀಳುತ್ತಾ ಕಸರತ್ತು ಪ್ರದರ್ಶಿಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
PublicNext
21/11/2021 10:59 pm