ಆನೇಕಲ್: ಭಾರಿ ಮಳೆಗೆ ಬೆಂಗಳೂರಿನ ಜಿಗಣಿಯ ಮಧುಮಿತ್ರ ಬಡಾವಣೆಗೆ ನೀರು ನುಗ್ಗಿದೆ. ಇದರ ಪರಿಣಾಮ ಜನರ ಸಂಚಾರ ಅಸ್ತವ್ಯಸ್ತಗೊಂಡಿದೆ.ತುರ್ತಾಗಿ ಹೊರಗಡೆ ಹೋಗುವವರನ್ನ ಇಲ್ಲಿಯ ಯುವಕರು ತೆಪ್ಪದ ಮೂಲಕ ಹೊರಗಡೆ ಕರೆದುಕೊಂಡು ಹೋಗುತ್ತಿದ್ದಾರೆ.
ಜಿಗಣಿಯ ಕೆರೆ ಕೋಡಿ ಒಡೆದಿರೋದ್ರಿಂದಲೇ ಜಿಗಣಿಯ ಮಧುಮಿತ್ರ ಬಡಾವಣೆಗೆ ನೀರು ಹರಿದು ಬಂದಿದೆ. ಮಳೆ ನೀರಲ್ಲದೆ ಕೊಳಚೆ ನೀರು ಕೂಡ ಬಡಾವಣೆಗೆ ನುಗ್ಗಿದೆ.ಇದರಿಂದ ನಡುಗಡ್ಡೆಯಂತಾದ ಈ ಬಡಾವಣೆ ಯುವಕರೇ ಈಗ ಜನರ ಸಹಾಯಕ್ಕೆ ಟ್ರ್ಯಾಕ್ಟರ್ ಬಳಸುತ್ತಿದ್ದಾರೆ. ಇನ್ನು ಕೆಲವರು ತೆಪ್ಪವನ್ನೂ ಕೂಡ ಇಲ್ಲಿ ಬಳಸಿ ನೆರವಾಗುತ್ತಿದ್ದಾರೆ.
PublicNext
20/11/2021 07:24 pm