ಹಾವೇರಿ : ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಒಂದಿಲ್ಲೊಂದು ತೊಂದರೆಗಳು ಶುರುವಾಗಿಯೇ ಇವೆ. ಇನ್ನು ನಿನ್ನೆ ಸುರಿದ ಭಾರಿ ಮಳೆಗೆ ಹಾವೇರಿ ಜಿಲ್ಲೆ ರಾಣೆಬೇನ್ನೂರು ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿರುವ ಕೋಳಿ ಫಾರಂಗೆ ನುಗ್ಗಿದ ಮಳೆ ನೀರಿಗೆ ಬರೋಬ್ಬರಿ 6940 ಕೋಳಿಗಳು ಸತ್ತು ಹೋಗಿವೆ.
ಕೋಳಿ ಫಾರ್ಮ್ ನಲ್ಲಿದ್ದ 7000 ಕೋಳಿಗಳಲ್ಲಿ ಪೈಕಿ 6940 ಕೋಳಿಗಳು ಸತ್ತು ಹೋಗಿವೆ. ಸ್ಥಳಕ್ಕೆ ರಾಣೆಬೇನ್ನೂರು ಶಾಸಕ ಅರುಣ್ ಕುಮಾರ್ ಪೂಜಾರಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಂಬಂಧಪಟ್ಟ ವೆಂಕೀಸ್ ಚಿಕನ್ ಫ್ಯಾಕ್ಟರಿಯ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಸೂಕ್ತ ಪರಿಹಾರ ಒದಗಿಸಲು ಶಾಸಕ ಅರುಣ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
PublicNext
20/11/2021 03:00 pm