ಹಾವೇರಿ: ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ವರದಾ, ಧರ್ಮಾ ಮತ್ತು ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ಪ್ರವಾಹ ಭೀತಿಯಲ್ಲಿದ್ದಾರೆ. ಸವಣೂರು ತಾಲ್ಲೂಕಿನ ಹತ್ತಿಮತ್ತೂರ ಗ್ರಾಮಕ್ಕೆ ಕೆರೆಯ ನೀರು ನುಗ್ಗುತ್ತಿದ್ದು ಆತಂಕದಲ್ಲಿರುವ ಗ್ರಾಮಸ್ಥರನ್ನು ಅಧಿಕಾರಿಗಳು ಭೇಟಿಯಾಗಿ ಧೈರ್ಯ ನೀಡುತ್ತಿದ್ದಾರೆ.
PublicNext
20/11/2021 01:26 pm