ಅಮರಾವತಿ: ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಕೆಲವೆಡೆ ನೆರೆ ಸೃಷ್ಟಿಯಾಗಿದೆ. ಅನಂತಪುರ ಜಿಲ್ಲೆಯ ರಭಸದಿಂದ ಹರಿಯುತ್ತಿದ್ದ ಚಿತ್ರಾವತಿ ನದಿಯ ನಡುವೆ ಸಿಲುಕಿದ್ದ ಹತ್ತು ಮಂದಿಯನ್ನು ಭಾರತೀಯ ವಾಯುಸೇನೆಯಿಂದ ರಕ್ಷಿಸಲಾಗಿದೆ.
ಬೆಂಗಳೂರಿನ ಯಲಹಂಕದ ವಾಯು ನೆಲೆಯಿಂದ ಟೇಕಾಫ್ ಆದ ಹೆಲಿಕಾಪ್ಟರ್ ಇದಾಗಿದೆ. Mi 17 ಹೆಲಿಕಾಪ್ಟರ್‌ನಿಂದ ರಕ್ಷಣಾ ಕಾರ್ಯ ಸಫಲವಾಗಿದೆ. ಆಂಧ್ರ ಸರ್ಕಾರದಿಂದ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಜನರ ರಕ್ಷಣೆಗಾಗಿ ಹೆಲಿಕಾಪ್ಟರ್ ಕಳುಹಿಸಿಕೊಡಲಾಗಿದೆ.
PublicNext
19/11/2021 10:30 pm