ಬೆಂಗಳೂರು: ರಾಜಧಾನಿಯ ಜನ ಮನೆಯಿಂದ ಹೊರಡುವ ಮೊದಲು ಇನ್ನೂ ಎರಡು ದಿನಗಳ ಕಾಲ ಮುಂಜಾಗೃತರಾಗಿರಬೇಕು. ಕಾರಣ, ರಾಜಧಾನಿಯಲ್ಲಿ ಇನ್ನೆರಡು ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಪ್ರಬಲ ವಾಯು ಭಾರ ಕುಸಿತ ಹಿನ್ನೆಲೆ, ರಾಜಧಾನಿಗೆ ಮುಂದಿನ ಎರಡು ದಿನಗಳು ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಬೆಂಗಳೂರಿಗೆ ಯಲ್ಲೊ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
PublicNext
18/11/2021 08:41 pm