ಹಾಸನ: ಇಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಮಲೆನಾಡಿನ ಜನ ಈಗ ಈ ಕಾಡಾನೆಗಳ ಉಪಟಳಕ್ಕೆ ಬೇಸರಗೊಂಡಿದ್ದಾರೆ. ಕಾಡಾನೆ ಸಮಸ್ಯೆಯನ್ನ ಪರಿಹರಿಸಿ ಅಂತಲೇ ಆಗ್ರಹಿಸುತ್ತಿದ್ದಾರೆ.
ಹೌದು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಜನ ಕೂಡ ಇದರಿಂದ ಬೇಸತ್ತಿದ್ದಾರೆ. ದನಗಳೊಟ್ಟಿಗೇನೆ ಕಾಡಾನೆಗಳು ಈಗ ಗಸ್ತು ತಿರುಗುತ್ತಿವೆ.
ಇದರಿಂದ ದನಕಾಯೋರು ಕೂಡ ಕಾಡಾನೆಗಳ ಈ ಅಟ್ಟಹಾಸಕ್ಕೆ ನಲುಗಿದ್ದಾರೆ. ಕಾಡಾನೆಗಳ ನಿರಂತರ ಹಾವಳಿಗೆ ಇಲ್ಲಿಯ ತೋಟದಲ್ಲಿ ಕೆಲಸ ಮಾಡೋ ಕೃಷಿ ಕಾರ್ಮಿಕರೂ ಭಯಪಡುತ್ತಿದ್ದಾರೆ. ಕಾಡಾನೆಗಳ ಈ ಸಮಸ್ಯೆ ಪರಿಹರಿಸಿ ಅಂತಲೂ ಮಲೆನಾಡ ಜನ ಈಗ ಆಗ್ರಹಿಸುತ್ತಿದ್ದಾರೆ.
PublicNext
15/11/2021 05:00 pm