ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರವಾಸಿಗರ ಮನಸೂರೆಗೊಳಿಸುತ್ತೆ ಮರವಂತೆ ಬೀಚ್ !

ವರದಿ: ರಹೀಂ ಉಜಿರೆ

ಮರವಂತೆ ; ಒಂದು ಕಡೆ ಭೋರ್ಗರೆಯುವ ಕಡಲು, ಮತ್ತೊಂದು ಕಡೆ ತುಂಬಿ ಹರಿಯುವ ನದಿ. ಇವುಗಳ ನಡುವೆ ರಾಷ್ಟೀಯ ಹೆದ್ದಾರಿ. ಭಾರತದಲ್ಲೇ ಇಂತಹ ವಿಶೇಷ ಪ್ರಕೃತಿ ವಿಸ್ಮಯ ,ಅದ್ಭುತ ಬೇರೆಲ್ಲೂ ಕಾಣಸಿಗದು....

ಯಾವತ್ತೂ ವಿರಮಿಸದೇ ಅಪ್ಪಳಿಸುವ ಸಮುದ್ರದ ಅಲೆ.. ಕಲ್ಲುಗಳ ಮೇಲೆ ಸೃಷ್ಟಿಯಾಗುವ ಹಾಲ್ನೊರೆ, ಕಣ್ಣು ಹಾಯಿಸಿದಷ್ಟೂ ಕಾಣುವ ಕಡಲ ನೀಲ ಜಲ ರಾಶಿ... ಇದು ಉಡುಪಿ ಜಿಲ್ಲೆಯ ಮರವಂತೆ ಕಲಡ ತೀರದ ನೋಟ... ಹೌದು, ನಮ್ಮ ದೇಶದಲ್ಲೇ ಹಲವಾರು ಸಮುದ್ರ ಕಿನಾರೆಗಳು ಇವೆ..ಆದರೆ ಮರವಂತೆ ಚೀಚ್ ವಿಶೇಷ ಯಾಕಂದ್ರೆ ಒಂದು ಕಡೆ ಅರಬ್ಬೀ ಸಮುದ್ರ ,ಮತ್ತೊಂದು ಕಡೆ ಸೌಪರ್ಣಿಕಾ ನದಿ. ನಡುವೆ ರಾಷ್ಟ್ರೀಯ ಹೆದ್ದಾರಿ.. ಒಂದೇ ದಂಡೆಯ ಅಕ್ಕ ಪಕ್ಕ ನದಿ, ಸಮುದ್ರ ಇರೋದು ನಮ್ಮ ದೇಶದಲ್ಲೇ ಅಪರೂಪ.. ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಸಮುದ್ರದತ್ತ ಹೊರಚಾಚಿರುವ ಗ್ರಾಯಿನ್ ಅಥವಾ ಕರೆಗೋಡೆ ಎಂದು ಕರೆಯಲಾಗುವ ಕಲ್ಲಿನ ನಿರ್ಮಾಣಗಳನ್ನು ರಚಿಸಲಾಗಿದೆ. ಇದರ ಮೇಲೆ ನಿಂತು ಸಮುದ್ರ ನೋಡುದೇ ಖುಷಿ, ಸಂತಸ. ಹೆದ್ದಾರಿ ಹೋಗುವವರನ್ನು ಈ ಪ್ರಾಕೃತಿಕ ವಿಶೇಷತೆ ಸೆಳೆಯುತ್ತಿದೆ..

ಸದ್ಯ ಮಳೆ ಕಡಿಯಾಗುತ್ತಿದ್ದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮರವಂತೆ ಬೀಚ್‌ನತ್ತ ದಾವಿಸುತ್ತಿದ್ದಾರೆ. ದೂರದ ಊರಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವವರು ಕೂಡ ತಮ್ಮ ವಾಹನ ನಿಲ್ಲಿಸಿ ಕ್ಷಣ ಕಾಲ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಸೆಲ್ಪಿ ಕ್ಲಿಕಿಸಿ ಆದಂದ ಪಡುತ್ತಿದ್ದಾರೆ.

ಯಾವಾಗಲೂ ಒಂದೇ ತರಹದ ಬೀಚ್ ನೋಡಿ, ಬೋರ್ ಆಯ್ತು ಅಂದ್ರೆ ಮರವಂತೆ ಬೀಚ್ ನತ್ತ ಒಮ್ಮೆ ಬಂದು ಖುಷಿ ಪಡಿ. ಉಡುಪಿ ಕಡೆ ಟೂರ್ ಬಂದ್ರೆ ಮರವಂತೆಗೂ ಒಂದ್ ರೌಂಡ್ ಹಾಕಿ.

Edited By : Nagesh Gaonkar
PublicNext

PublicNext

11/11/2021 06:31 pm

Cinque Terre

35.61 K

Cinque Terre

1