ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ಭಾರಿ ಮಳೆ: ಹಾನಿ ಪ್ರದೇಶಕ್ಕೆ ಸಿಎಂ ಸ್ಟಾಲಿನ್ ಭೇಟಿ

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆ ಸುರಿದ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕೆಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಎಂ.ಕೆ ಸ್ಟಾಲಿನ್ ಭೇಟಿ ಕೊಟ್ಟಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸ್ಟಾಲಿನ್ ಅವರೊಂದಿಗೆ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೇಂದ್ರದಿಂದ ಅಗತ್ಯ ನೆರವು ನೀಡೋದಾಗಿ ಹೇಳಿದ್ದಾರೆ.

ಸದ್ಯ ಜನರ ರಕ್ಷಣೆಗಾಗಿ ನಾಲ್ಕು ಎನ್‌ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಇನ್ನೂ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಜನವಸತಿ ಪ್ರದೇಶಗಳಲ್ಲಿ ನೀರು ನಿಂತಿದೆ. ಹೀಗಾಗಿ ಜನ ಆತಂಕದಲ್ಲಿದ್ದಾರೆ. ಇನ್ನೂ ಒಂದು ವಾರ ಕಾಲ ಇದೇ ರೀತಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಾಂಡಿಚೇರಿ ಭಾಗದಲ್ಲಿ 43%ರಷ್ಟು ಮಳೆ ಆಗಿದೆ. ಭಾರಿ ಮಳೆಯ ಪರಿಣಾಮ ಚೆನ್ನೈ ಹಾಗೂ ಕಾಂಚೀಪುರಂನಲ್ಲಿ ಶಾಲಾ-ಕಾಲೇಜುಗಳಿಗೆಧ ರಜೆ ಘೋಷಿಸಲಾಗಿದೆ. ಒಟ್ಟರೆ ಮಹಾಮಳೆಗೆ ತಮಿಳುನಾಡು ತತ್ತರಗೊಂಡಿದೆ.

Edited By : Shivu K
PublicNext

PublicNext

08/11/2021 12:52 pm

Cinque Terre

54.96 K

Cinque Terre

1

ಸಂಬಂಧಿತ ಸುದ್ದಿ