ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಕ್ಷಿಣ ಬೆಂಗಳೂರಿನಲ್ಲಿ ಮಳೆಯ ಅವಾಂತರ, ರಾತ್ರಿ ಇಡಿ ಜನರ ಜಾಗರಣೆ

ಎಲ್ಲೆಡೆ ದೀಪಾವಳಿ ಸಂಭ್ರಮ ಮನೆಮಾಡಿದ್ದರೆ, ಬೆಂಗಳೂರಿನ ದಕ್ಷಿಣ ಭಾಗದವರಿಗೆ ಮಾತ್ರ ನಿನ್ನೆ ರಾತ್ರಿ ಬಿಟ್ಟು ಬಿಡದೆ ಸುರಿದ ಮಳೆ ನರಕಸದೃಶ ಅನುಭವ ಉಂಟುಮಾಡಿದೆ.

ಮಳೆಯ ಅವಾಂತರಕ್ಕೆ ದಕ್ಷಿಣ ಪ್ರದೇಶದ ಮಿನೆರಲ್ ಸರ್ಕಲ್, ಜೆಸಿ ಕ್ರಾಸ್, ವಿವಿಪುರಂ, ಜೈನ್ ಟೆಂಪಲ್, ಜೆ ಸಿ ರಸ್ತೆ, ಕೆಆರ್ ರೋಡ್, ಶಂಕರಮಠ ರಸ್ತೆ, ಕಲ್ಲಪ್ಪ ಲೇಔಟ್, ದೊಡ್ಡನಕುಂಡಿ, ನಿಸರ್ಗ ಲೇಔಟ್, ಮಾರತಳ್ಳಿ, ಮಹದೇವಪುರದಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಮನೆಗಳಿಗೆ ನೀರು ನುಗ್ಗಿ , ಜನರು ನೀರನ್ನು ಹೊರಹಾಕಲು ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ.

ಬೆಂಗಳೂರು ಪೂರ್ವದಲ್ಲಿ‌ ಹೆಚ್ಚಿನ ಮಳೆ ಎಫೆಕ್ಟ್ ಆಗಿಲ್ಲ,ಬೆಂಗಳೂರು ಪಶ್ಚಿಮ ವಲಯದಲ್ಲಿ ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಒಟ್ಟಿನಲ್ಲಿ ದೀಪಗಳ ಜೊತೆ ಹಬ್ಬ ಆಚರಿಸಲು ಮಳೆರಾಯ ಅಡ್ಡಿಯಾಗಿದ್ದು ಜನರನ್ನು ಅಕ್ಷರಶಃ ಕಾಡುತ್ತಿದೆ.

Edited By : Shivu K
PublicNext

PublicNext

05/11/2021 12:21 pm

Cinque Terre

75.76 K

Cinque Terre

0