ಇಟಾನಗರ(ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ಕಮೆಂಗ್ ನದಿಯ ನೀರು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ. ಪರಿಣಾಮ ನದಿಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಸತ್ತ ಮೀನುಗಳು ತೇಲುತ್ತಿರುವುದು ಕಾಣುತ್ತಿದೆ.
ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ಮೀನುಗಳನ್ನು ತಿನ್ನದಂತೆ ಸ್ಥಳೀಯ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ಕೊಟ್ಟಿದ್ದಾರೆ.
ಪೂರ್ವ ಕಮೆಂಗ್ ಜಿಲ್ಲೆಯಲ್ಲಿ ಉಗಮವಾಗುವ ಈ ನದಿ ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ. total dissolved substances ಅಂದರೆ ಒಟ್ಟು ಕರಗಿದ ಹೆಚ್ಚಿನ ಅಂಶವೇ ಇದಕ್ಕೆ ಕಾರಣ. ನದಿಯ ಸ್ಥಿತಿ ಹೀಗೆಯೇ ಇದ್ದರೆ ಕೆಲವೇ ದಿನಗಳಲ್ಲಿ ನದಿಯಲ್ಲಿನ ಎಲ್ಲ ಜಲಚರಗಳು ನಾಶವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
31/10/2021 06:05 pm