ಉತ್ತರಕನ್ನಡ ಜಿಲ್ಲೆಯ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರವಾದ ಮಗುವೊಂದು ಜನನವಾಗಿದ್ದು, ಮಗು ಹಾಗೂ ತಾಯಿ ಸುರಕ್ಷಿತವಾಗಿದ್ದಾರೆ. ಕುಮಟಾ ತಾಲೂಕಿನ ಮಹಿಳೆಯಾಗಿದ್ದ ಈಕೆ ಹೊಟ್ಟೆ ನೋವಿನಿಂದ ಭಟ್ಕಳ ಅಸ್ಪತ್ರೆಗೆ ದಾಖಲಾಗಿದ್ರು.ಈ ವೇಳೆ ಸ್ಕ್ಯಾನಿಂಗ್ ಮಾಡಿದಾಗ ಎರಡು ತಲೆ ಇರುವುದನ್ನು ಕಂಡು ವೈದ್ಯರೇ ದಂಗಾಗಿದ್ರು.
ಗರ್ಭಿಣಿಯಾಗಿದ್ದ ಆಕೆ ಸುಮಾರು 8 ತಿಂಗಳವರೆಗೆ ಕುಮಟಾದ ಪ್ರಖ್ಯಾತ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ್ರು.ಮಗು ಉಳಿಯುವ ಬಗ್ಗೆ ಭರವಸೆ ನೀಡಿರಲಿಲ್ಲ. ಬಳಿಕ ಭಟ್ಕಳ ಆಸ್ಪತ್ರೆಗೆ ದಾಖಲಾಗಿದ್ರು. ಅಲ್ಲಿನ ಹೆರಿಗೆ ತಜ್ಞೆ ಡಾ. ಶಂಸನೂರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ಈ ರೀತಿ ಸಾವಿರದಲ್ಲಿ ಒಂದು ಆಗುತ್ತದೆ ಎಂದು ವೈದ್ಯರೇ ಮಾಹಿತಿ ನೀಡಿದ್ದಾರೆ.
PublicNext
28/10/2021 10:42 am