ತುಮಕೂರು: ನಿನ್ನೆ ಶನಿವಾರ ಸುರಿದ ಭಾರಿ ಮಳೆಯ ಪರಿಣಾಮ ತುಮಕೂರು ಜಿಲ್ಲೆಯ ಹಲವೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಶಿರಾ ತಾಲೂಕಿನ ಹಾವಿನಾಳು ಗ್ರಾಮದಲ್ಲಿ ರಸ್ತೆ ಕುಸಿದ ಪರಿಣಾಮ ಆಟೋ ರಿಕ್ಷಾ ಒಂದು ಸೇತುವೆ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಅದೃಷ್ಟವಶಾತ್ ರಿಕ್ಷಾ ಚಾಲಕ ಪಾರಾಗಿದ್ದಾನೆ.
ಹಳ್ಳ ತುಂಬಿದ್ದರಿಂದ ರಸ್ತೆಯಲ್ಲಿ ನೀರು. ಹರಿಯುತ್ತಿತ್ತು. ಇದೇ ವೇಳೆ ರಸ್ತೆ ಕುಸಿದ ಪರಿಣಾಮ ಸೇತುವೆ ಕೆಳಗೆ ರಿಕ್ಷಾ ಬಿದ್ದಿದೆ. ಸ್ಥಳೀಯರು ಕೂಡಿ ಆಟೋ ರಿಕ್ಷಾವನ್ನು ಮೇಲೆತ್ತಿದ್ದಾರೆ.
PublicNext
24/10/2021 07:57 pm