ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರದಲ್ಲಿ 300ಕ್ಕು ಹೆಚ್ಚು ನಾಟಿ ಕೋಳಿಗಳನ್ನು ಕೊಂದು ಹಾಕಿದ ಚಿರತೆ

ರಾಮನಗರ: ಕೋಳಿ ಫಾರಂಗೆ ನುಗ್ಗಿದ್ದ ಚಿರತೆಯೊಂದು ನಾಟಿ ಕೋಳಿಗಳನ್ನ ‌ತಿಂದು ಹಾಕಿದೆ. ಈ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಶೆಟ್ಟಿಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಭಾಸ್ಕರ್ ಎಂಬುವರಿಗೆ ಸೇರಿದ ನಾಟಿ ಕೋಳಿ ಫಾರಂಗೆ ಶುಕ್ರವಾರ ರಾತ್ರಿ ಚಿರತೆ ನುಗ್ಗಿದೆ.

ಫಾರಂನಲ್ಲಿ ಇದ್ದ 300ಕ್ಕು ಹೆಚ್ಚು ನಾಟಿ ಕೋಳಿಗಳನ್ನ ಚಿರತೆ ಕೊಂದು ಹಾಕಿದೆ. ತಡರಾತ್ರಿ ಕೋಳಿ ಫಾರಂಗೆ ಅಳವಡಿಸಿದ್ದ ಕಬ್ಬಿಣದ ತಂತಿಯ ಮೆಸ್ ಕಿತ್ತು ಒಳನುಗ್ಗಿದ್ದ ಚಿರತೆ ನಾಟಿ ಕೋಳಿಗಳನ್ನ ಕೊಂದು ಹಾಕಿದೆ. ತಡರಾತ್ರಿ 12 ಗಂಟೆ ಸಮಯದಲ್ಲಿ ಕೋಳಿಗಳಿಗೆ ಆಹಾರ ಹಾಕಲು ಭಾಸ್ಕರ್ ಫಾರಂ ಒಳಗೆ ಬಂದಿದ್ದಾರೆ. ಅಷ್ಟರಲ್ಲಾಗಲೇ ಚಿರತೆ ಕೋಳಿಗಳನ್ನ ಕೊಂದು ಹಾಕಿತ್ತು.

ಇತ್ತೀಚೆಗೆ ಫಾರಂ ಕೋಳಿಗಳಿಗಿಂತ ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ ಇಂತಹ ಸಮಯದಲ್ಲಿ ಭಾಸ್ಕರ್ ಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಇನ್ನೂ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ರು. ಇತ್ತ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಇಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.

Edited By : Manjunath H D
PublicNext

PublicNext

24/10/2021 10:28 am

Cinque Terre

52.6 K

Cinque Terre

0

ಸಂಬಂಧಿತ ಸುದ್ದಿ