ವಿಜಯಪುರ : ವಿಜಯಪುರದಲ್ಲಿ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿದೆ ಇಂದು ಕೂಡಾ ಹಿಟ್ನಳ್ಳಿಯಲ್ಲಿ ಭೂಕಂಪನ ಸಂಭವಿಸಿದೆ. ಕಳೆದ ಒಂದು ತಿಂಗಳಿನ ಒಳಗೆ ಹಲವು ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಭೂಮಿ ಕಂಪಿಸಿದ್ದು ಜನರು ಆತಂಕಕ್ಕೀಡಾಗಿದ್ದಾರೆ.
ಹಿಟ್ನಳ್ಳಿ ಕೇಂದ್ರಿತವಾಗಿ ಜುಮನಾಳ, ಮನಗೂಳಿ ಪರಿಸರದಲ್ಲಿ ಗುರುವಾರ ಸಂಜೆ 6.22ಕ್ಕೆ ಸಂಭವಿಸಿದ ಭೂಕಂಪ 3.1 ಪ್ರಮಾಣದಷ್ಟು ತೀವ್ರತೆ ಹೊಂದಿದೆ.
ಇನ್ನು ಭೂಮಿ ಕಂಪಿಸಿದಾಗ ಮನೆಯಲ್ಲಿ ಇದ್ದವರು ಜೀವ ಭಯದಲ್ಲಿ ಹೊರಗೆ ಓಡಿ ಬಂದಿದ್ದಾರೆ.ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ರಿಕ್ಟರ್ ಮಾಪಕದ ದಾಖಲೆ ಆಧರಿಸಿ ಜಿಲ್ಲಾಡಳಿತ ಭೂಕಂಪ ಸಂಭವಿಸಿದ್ದನ್ನು ದೃಢಪಡಿಸಿದೆ.
PublicNext
14/10/2021 09:31 pm