ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ದಿಂಬಾರ್ಲಹಳ್ಳಿ ಕೆರೆಕಟ್ಟೆ ಒಡೆದು ನೀರು ಪೋಲಾಗುತ್ತಿದೆ. ನಿನ್ನೆ ಸಂಜೆ ಎಡಬಿಡದೇ ಸುರಿದ ಧಾರಾಕಾರ ಮಳೆಗೆ ಎರಡು ದಶಕಗಳ ಬಳಿಕ ಕೆರೆಗಳು ತುಂಬಿ ಹರಿದಿವೆ.
ಇನ್ನು ನಿರಂತರ ಮಳೆಯಿಂದಾಗಿ ಕೆರೆಕಟ್ಟೆ ಬಿರುಕು ಬಿಟ್ಟು ಅಪಾರ ಪ್ರಮಾಣದ ಮಳೆ ನೀರು ಪೋಲಾಗಿದೆ. ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
13/10/2021 01:52 pm