ಕ್ಯಾಸಲ್‌ರಾಕ್: ಬೆಳಗಾವಿ ಮತ್ತು ಗೋವಾ ರಾಜ್ಯದ ಗಡಿಯಲ್ಲಿ ಬರೋ ಕ್ಯಾಸಲ್‌ರಾಕ್ ರೈಲ್ವೆ ಮಾರ್ಗದಲ್ಲಿ ಸಂಚರಿಸಿದ್ರೆ, ನಿಮಗೆ ನಿಜಕ್ಕೂ ಸ್ವರ್ಗವೇ ಭೂಮಿ ಮೇಲೆ ಕೆಳಗಿಳಿದು ಬಂದಂತೆ ಅನುಭವ ಆಗುತ್ತದೆ.ಅದನ್ನ ಕ್ಯಾಪ್ಚರ್ ಮಾಡೋದೂ ಕೂಡ ಇನ್ನೊಂದು ಖುಷಿ. ಆ ಖುಷಿಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋ ವೀಡಿಯೋವೊಂದು ನಿಮ್ಮ ಮನದಲ್ಲಿ ಹೊಸ ಸೆಳೆತವನ್ನೇ ಹುಟ್ಟುಹಾಕುತ್ತದೆ.ಚಾರಣಕ್ಕೆ ಹೊರಟು ನಿಲ್ಲುವಂತೆ ಮಾಡುತ್ತದೆ.
ಬೆಳಗಾವಿ ಹಾಗೂ ಗೋವಾ ರಾಜ್ಯದ ಗಡಿಯಲ್ಲಿದೆ ಈ ದೂಧ್ ಸಾಗರ್. ನಿಸರ್ಗ ನಿರ್ಮಿತ ಈ ಸುಂದರ ಜಾಗಕ್ಕೆ ತೆರಳಲು ನೀವು ರೈಲು ಪ್ರಯಾಣ ಮಾಡಿದ್ರೇನೆ ಚೆಂದ. ಆಗಲೇ ದೂಧ್ ಸಾಗರ್ ನ ಆ ಜಲಪಾತದ ರಮಣೀಯ ದೃಶ್ಯದ ಅನುಭವ ನಿಮಗೆ ದಕ್ಕುತ್ತದೆ. ಧೂದ್ ಸಾಗರ್ ಗೆ ಸಾಗಿ ಬರೋ ರೈಲು ನಿಮಗೆ ನಿಸರ್ಗದ ಅಷ್ಟೂ ಸುಂದರ ಅನುಭವವನ್ನ ಕಟ್ಟಿಕೊಡುತ್ತದೆ. ಅಷ್ಟು ಚೆಂದದ ದೃಶ್ಯವನ್ನ ಈಗ ರೇಲ್ವೆ ಸಚಿವಾಲಯವೇ ಸೆರೆಹಿಡಿದಿದೆ. ತನ್ನ ಅಧಿಕೃತ ಪೇಜ್ ಅಲ್ಲೂ ಹಂಚಿಕೊಂಡಿದೆ.
ಇಷ್ಟೆಲ್ಲ ಅದ್ಭುತವಾದ ವೀಡಿಯೋವನ್ನ ನೋಡಿದ್ಮೇಲೆ ಇಲ್ಲಿಗೆ ಹೋಗಲೇಬೇಕು ಅನಿಸುತ್ತದೆ. ಯಾಕೆಂದ್ರೆ, ದೂಧ್ ಸಾಗರ್ ಜಲಪಾತದ ಸೆಳೆತವೇ ಹಾಗಿದೆ. ಇಲ್ಲಿಗೆ ನೀವ್ ಹೋಗ್ಬೇಕು ಅಂದ್ರೆ, ನೀವೂ ಬೆಳಗಾವಿಗೆ ಶನಿವಾರವೇ ಬಂದು ತಲುಪಬೇಕು.ಅಲ್ಲಿಂದ ಕ್ಯಾಸಲ್‌ರಾಕ್ ಹೋಗೋಕೆ ರೈಲು ಸಿಗುತ್ತವೆ. ಇದು ನಿಜಕ್ಕೂ ವಿಶೇಷ ಅನುಭವವೇ ಆಗುತ್ತದೆ. ವಿಶೇಷ ಚಾರಣವೂ ಆಗುತ್ತದೆ. ಒಮ್ಮೆ ಹೋಗ್ರಲ್ಲ.
PublicNext
11/10/2021 03:37 pm