ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ಲಘು ಭೂಕಂಪನದ ಅನುಭವ ಇಲ್ಲಿನ ಜನರಿಗೆ ಆಗಿದೆ. ಚಿಂಚೋಳಿ ತಾಲೂಕಿನ ಗಡಿಕೇಶ್ವರ ಹಾಗೂ ಯರಕೊಂಡ ಗ್ರಾಮಗಳಲ್ಲಿ ಲಘು ಭೂಕಂಪವಾದ ಪರಿಣಾಮ ಗ್ರಾಮಸ್ಥರು ಆತಂಕಗೊಂಡೊದ್ದಾರೆ.
ನಸುಕಿನ ಜಾವ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನ ಅನುಭವ ಜನರಿಗೆ ಆಗಿದೆ. ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಹೀಗಾಗಿ ಜನರು ಆತಂಕದಿಂದ ಮನೆಯಿಂದ ಹೊರಬಂದಿದ್ದಾರೆ. ನಿನ್ನೆ ಕೂಡಾ ಗ್ರಾಮದಲ್ಲಿ ಲಘು ಭೂ ಕಂಪನವಾಗಿತ್ತು. ಕಳೆದ ಕೆಲ ವರ್ಷಗಳಲ್ಲಿ ಹಲವಾರು ಬಾರಿ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿ ಬರ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನ ಅನುಭವ ಆಗುತ್ತಿದೆ.
PublicNext
10/10/2021 08:20 am