ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ಹಲಚೇರಾ ಗ್ರಾಮಗಳಲ್ಲಿ ಇಂದು ಬೆಳಗಿನ ಜಾವ 5.40 ರಿಂದ 6.೦೦ ಗಂಟೆಯೊಳಗೆ ಮೂರು ಬಾರಿ ಭೂ ಕಂಪನವಾಗಿದೆ.
ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳೆಲ್ಲಾ ಕೆಳಗೆ ಬಿದ್ದಿದ್ದು ಗ್ರಾಮದ ಜನರು ಆತಂಕದಿಂದ ಮನೆಯಿಂದ ಹೊರ ಓಡಿ ಬಂದಿದ್ದಾರೆ. ನಿನ್ನೆಯೂ ಕೂಡಾ ಗ್ರಾಮಗಳಲ್ಲಿ ಲಘು ಭೂ ಕಂಪನವಾಗಿತ್ತು,ಕಳೆದ ಕೆಲ ವರ್ಷಗಳಿಂದ ಭೂಮಿಯಿಂದ ಭಾರಿ ಸದ್ದು ಕೇಳಿ ಬರ್ತಿರೋ ಎನ್ನುತ್ತಾರೆ ಗ್ರಾಮಸ್ಥರು.
ಇದೀಗ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಬೀತರಾಗಿದ್ದಾರೆ.
PublicNext
09/10/2021 10:32 am