ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತರೀಕೆರೆಯಲ್ಲಿ ವರುಣಾರ್ಭಟ : ಅಡಿಕೆ ತೋಟದಲ್ಲಿ 2 ಅಡಿ ಮಳೆ ನೀರು

ಚಿಕ್ಕಮಗಳೂರು : ರಾಜ್ಯದಲ್ಲಿ ವರುಣಾರ್ಭಟ ತುಸು ಜೋರಾಗಿದೆ. ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸದ್ಯ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಸೇತುವೆ ಕಾಣದಂತೆ ಎರಡು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ.

ತರೀಕೆರೆ-ನೇರಲಕೆರೆ ಸಂಪರ್ಕ ಕಡಿತವಾಗಿದ್ದು ಅಡಿಕೆ ತೋಟದಲ್ಲಿ ಎರಡು ಅಡಿ ನೀರು ನಿಂತಿದೆ. ನೇರಲಕೆರೆ, ಹುಣಸಘಟ್ಟ ಭಾಗದ ತೋಟಗಳು ಜಲಾವೃತವಾಗಿದೆ. ವರುಣಾರ್ಭಟಕ್ಕೆ ಅಡಿಕೆಯ ಕೊಯ್ಲು ಮಾಡಲಾಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಜೊತೆಗೆ ಶೀತ

ಹೆಚ್ವಾಗಿ ಅಡಿಕೆ ಉದುರುವ ಆತಂಕದಲ್ಲಿ ಬೆಳೆಗಾರರು ದಿನಗಳೆಯುತ್ತಿದ್ದಾರೆ.

Edited By : Nagesh Gaonkar
PublicNext

PublicNext

06/10/2021 10:12 pm

Cinque Terre

52.43 K

Cinque Terre

0

ಸಂಬಂಧಿತ ಸುದ್ದಿ