ಕಲಬುರಗಿ : ಈ ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ ಮಳೆ ಬಂದರಂತೂ ಇಲ್ಲಿಯ ಜನರ ಕಷ್ಟ ಅಷ್ಟಿಷ್ಟಲ್ಲ. ಹೌದು ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಿದನೂರು ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲವಾಗಿದೆ.
ಸಿದನೂರು ಗ್ರಾಮದಿಂದ ರೇವೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಂದು ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಅದೇಷ್ಟೊ ಬಾರಿ ಮನವಿ ಮಾಡಿದರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ.
ಇದಕ್ಕೆ ಹಸಿ ಸಾಕ್ಷಿ ಜನ ಹೀಗೆ ಹಗ್ಗ ಹಿಡಿದು ಹಳ್ಳ ದಾಟುತ್ತಿರುವ ದೃಶ್ಯ. ತುಂಬಿ ಹರಿಯುತ್ತಿರುವ ಸಿದನೂರು ಹಳ್ಳವನ್ನು ಜನ ಜೀವದ ಹಂಗೂ ತೊರೆದು ಹಗ್ಗ ಹಿಡಿದು ಹಳ್ಳ ದಾಟುತ್ತಿದ್ದಾರೆ. ಇನ್ನು ಸಿದನೂರು ಗ್ರಾಮದಿಂದ ರೇವೂರು ಗ್ರಾಮಕ್ಕೆ ಹೋಗಿದ್ದ 8 ಜನರನ್ನು ಗ್ರಾಮಸ್ಥರು ಹಗ್ಗದ ಸಹಾಯದಿಂದ ಹಳ್ಳ ದಾಟಿಸಿದ್ದಾರೆ.
ಇದು ಇಂದು ನಿನ್ನೆಯ ಸಮಸ್ಯೆಯಲ್ಲ ಇನ್ನಾದರೂ ಸಿದನೂರು ಮತ್ತು ರೇವೂರು ಗ್ರಾಮದ ನಡುವೆ ಸೇತುವೆ ನಿರ್ಮಾಣವಾಗತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
PublicNext
05/10/2021 04:21 pm