ಜೊಹೊ ಕಾರ್ಪೋರೇಷನ್ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಅವರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಒಂದು ಇಮೇಜ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವಿಶೇಷತೆ ಎಂದರೆ ಅವರೆಲ್ಲ ಸೇರಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಕೈಯಲ್ಲಿ ಎತ್ತಿ ಹಿಡಿದಿರುವುದು.
'12-ಅಡಿ ಉದ್ದನೆಯ ಕಿಂಗ್ ಕೋಬ್ರಾ ನಮ್ಮ ಆವರಣಕ್ಕೆ ಭೇಟಿ ನೀಡಿದ ಸಂದರ್ಭ. ನಮ್ಮ ಪ್ರಶಂಸಾರ್ಹ ಅರಣ್ಯ ಇಲಾಖೆ ಸಿಬ್ಬಂದಿಯು ಅದನ್ನು ಹಿಡಿದು ಹತ್ತಿರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟರು. ಅದನ್ನು ಮುಟ್ಟುವ ಧೈರ್ಯ ನಾನು ಮಾಡಿದೆ. ಇಂದು ನನಗೆ ತುಂಬಾ ಒಳ್ಳೆ ಶಕುನದ ದಿನ!' ಎಂದು ಶ್ರೀಧರ್ ವೆಂಬು ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ಭಾರತದಲ್ಲಿ ಕಾಣಿಸಿಕೊಳ್ಳುವ ಮೊದಲು ಶ್ರೀಧರ್ ವೆಂಬು ಅವರು ದಕ್ಷಿಣ ತಮಿಳುನಾಡಿನ ಭಾಗದಲ್ಲಿರುವ ರುದ್ರ ರಮಣೀಯ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ತೆಂಕಸಾಯಿ ಹತ್ತಿರದ ಮಥಲಂಪರೈ ಗ್ರಾಮಕ್ಕೆ ತೆರಳಿದ್ದು ಅಲ್ಲೇ ನೆಲಸಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ಕೆಲವರು ತಮಗೆ ತಿಳಿದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
PublicNext
22/09/2021 03:36 pm