ಕಾರವಾರ: ಕಾರವಾರ ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿಂದ ಅಪರೂಪದ ಕಡಲ ಜೀವಿಗಳ ಕಳೇಬರ ಪತ್ತೆಯಾಗುತ್ತಿದೆ. ಈ ಹಿಂದೆ ಡಾಲ್ಫಿನ್ ,ಅಪರೂಪದ ಸಮುದ್ರ ಆಮೆಗಳ ಕಳೇಬರ ಪತ್ತೆಯಾಗಿದ್ದವು. ಆದರೆ ಇದೀಗ ಕಾರವಾರ ತಾಲ್ಲೂಕಿನ ಮಾಜಾಳಿ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಟೈಗರ್ ಶಾರ್ಕ್ ಹೆಣ್ಣು ಮೀನಿನ ಕಳೇಬರ ಕಂಡುಬಂದಿದೆ.
ಈ ಶಾರ್ಕ ಮೀನಿನ ಕಳೇಬರವು ಒಂದೂವರೆ ಮೀಟರ್ ಉದ್ದವಿದ್ದು ಮೂವತ್ತು ಕೆಜಿ ಭಾರವಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಡಲ ಜೀವಶಾಸ್ತ್ರಜ್ಞರು ಇದರ ಕಳೇಬರವನ್ನು ಪರೀಕ್ಷಿಸಿದ್ದಾರೆ. ವಿಶ್ವದಾದ್ಯಂತ ಆಳಸಮುದ್ರದಲ್ಲಿ ಕಂಡುಬರುವ ಪ್ರಭೇದ ಇದಾಗಿದ್ದು, ಹುಲಿಯ ಚರ್ಮದಲ್ಲಿರುವಂಥ ಪಟ್ಟೆಗಳನ್ನು ಹೊಂದಿದೆ. ಈವಕಾರಣ ದಿಂದ ಟೈಗರ್ ಶಾರ್ಕ್ ಎಂಬ ಹೆಸರು ಬಂದಿದೆ.
PublicNext
22/09/2021 03:04 pm