ಉತ್ತರಕನ್ನಡ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕೊಡ್ಸಳ್ಳಿ ಎಂಬಲ್ಲಿ ಈ ಭೂಕುಸಿತ ಸಂಭವಿಸಿದೆ. ಇಲ್ಲಿನ ಕೊಡ್ಸಳ್ಳಿ ಅಣೆಕಟ್ಟು ಸಮೀಪವೇ ಈ ಭೂಕುಸಿತ ಸಂಭವಿಸಿರುವುದು ಆತಂಕದ ಪ್ರಮಾಣವನ್ನು ಹೆಚ್ಚಿಸಿದೆ. ಸುಮಾರು 200 ಮೀಟರ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಕದ್ರಾದಿಂದ ಕೊಡ್ಸಳ್ಳಿ ಮಾರ್ಗದ ಸಂಪರ್ಕವೂ ಕಡಿತಗೊಂಡಿದೆ.
ಭೂಕುಸಿತದಿಂದಾಗಿ ಗುಡ್ಡದಿಂದ ಬಂಡೆಗಲ್ಲುಗಳು ಜಾರಿ ಬಂದಿರುವುದಲ್ಲೆ ಗಿಡಮರಗಳೂ ಹಾನಿಗೀಡಾಗಿವೆ. ಸ್ಥಳಕ್ಕೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳಾದ ಕಮಲಕುಮಾರ, ಮೋಹನರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
PublicNext
14/09/2021 06:05 pm