ನವದೆಹಲಿ: ದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಸಂಭವಿಸಿದ ಭಾರೀ ಮಳೆ, ಪ್ರವಾಹ, ಚಂಡಮಾರುತ ಸೇರಿದಂತೆ ಇತರ ಜಲ ಹವಾಮಾನ ವೈಪರೀತ್ಯಕ್ಕೆ 6,811 ಜನ ಬಲಿಯಾಗಿದ್ದಾರೆ.
ಹೌದು. 2018ರ ಎಪ್ರಿಲ್‌ನಿಂದ 2021ರ ಮಾರ್ಚ್ ವರೆಗಿನ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಸಾವು ಸಂಭವಿಸಿದೆ ಎಂದು ಕಳೆದ ತಿಂಗಳು ಆಗಸ್ಟ್‌ನಲ್ಲಿ ಲೋಕಸಭೆಗೆ ಮಾಹಿತಿ ನೀಡಲಾಗಿದೆ. ಇದರಂತೆ ಅತಿ ಹೆಚ್ಚು ಸಾವು-ನೋವು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳವು ಮೊದಲ ಸ್ಥಾನದಲ್ಲಿದೆ. ಇಲ್ಲಿ ಕಳೆದ ಮೂರು ವರ್ಷಗಳಿಂದ 964 ಜನ ಭಾರೀ ಮಳೆ, ಪ್ರವಾಹ, ಚಂಡಮಾರುತದಿಂದ ಸಾವನ್ನಪ್ಪಿದ್ದಾರೆ. ಇದೇ ಅವಧಿಯಲ್ಲಿ ಮಧ್ಯಪ್ರದೇಶದ 917 ಮಂದಿ ಹಾಗೂ ಕೇರಳದ 708 ಜನರು ಬಲಿಯಾಗಿದ್ದಾರೆ.
PublicNext
14/09/2021 02:58 pm