ಚಾಮರಾಜನಗರ: ತನ್ನ ವ್ಯಾಪ್ತಿಯಲ್ಲಿ ಇನ್ನೊಂದು ಹುಲಿ ಬಂದಿತೆಂಬ ಕಾರಣಕ್ಕಾಗಿ ಎರಡು ಹುಲಿಗಳ ನಡುವೆ ಕಾದಾಟ ಶುರುವಾಗಿದೆ. ಇದರಲ್ಲಿ ಒಂದು ಹುಲಿ ಮೃತಪಟ್ಟಿದೆ.
ಈ ಸರಹದ್ದಿನ ಕದನದಲ್ಲಿ ಹುಲಿ ಮೃತಪಟ್ಟ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಎಲಚೆಟ್ಟಿ ಗಸ್ತಿನ ಆಲದಮರದ ಹಳ್ಳದಲ್ಲಿ ನಡೆದಿದೆ. ಅಂದಾಜು 4 ರಿಂದ 5 ವರ್ಷದ ಗಂಡು ಹುಲಿ ಮೃತಪಟ್ಟಿದ್ದು, ಹುಲಿಗಳ ನಡುವಿನ ಸರಹದ್ದಿನ ಕಾದಾಟದಲ್ಲಿ ಸತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಮೃತ ಹುಲಿ ಮೈಮೇಲೆ ತೀವ್ರತರ ಗಾಯಗಳಾಗಿದ್ದು, ಉಗುರು, ಹಲ್ಲುಗಳು, ಅಂಗಾಂಗಗಳು ಸುರಕ್ಷಿತವಾಗಿವೆ.
PublicNext
13/08/2021 08:54 pm