ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಾಖಂಡ ಪ್ರವಾಹ: ಮೃತರ ಸಂಖ್ಯೆ 26ಕ್ಕೆ ಏರಿಕೆ- 171 ಮಂದಿ ಪತ್ತೆ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡದ ದ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತದಿಂದಾಗಿ ಉಂಟಾದ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಸೋಮವಾರ ರಾತ್ರಿ 8ರ ವರೆಗೂ 26 ಮೃತದೇಹಗಳು ಪತ್ತೆಯಾಗಿವೆ.

ವಿದ್ಯುತ್ ಸ್ಥಾವರದ ಬಳಿಯ ಸುರಂಗದಲ್ಲಿ ಪವರ್​ ಪ್ಲಾಂಟ್​ನ ಹಿರಿಯ ಅಧಿಕಾರಿಗಳು, ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ 171 ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ 35 ಜನರು ಸುರಂಗದಲ್ಲಿ ಸಿಲುಕಿದ್ದಾರೆಂದು ನಂಬಲಾಗಿದೆ. ರಕ್ಷಣಾ ತಂಡಗಳು ವಿವಿಧ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ. ಉತ್ತರಾಖಂಡದಲ್ಲಿ ಜೋಶಿ ಮಠದ ಬಳಿ ಹಿಮನದಿ ಸ್ಫೋಟಗೊಂಡು ಹಲವು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಂಗಾ ನದಿಯ ತಟದಲ್ಲಿರುವ ಎಲ್ಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Edited By : Vijay Kumar
PublicNext

PublicNext

08/02/2021 10:15 pm

Cinque Terre

62.27 K

Cinque Terre

0

ಸಂಬಂಧಿತ ಸುದ್ದಿ