ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಎದುರಿನ ಕೆರೆಯಂಗಳದಲ್ಲಿ ಪಕ್ಷಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ. ಈ ಮೂಲಕ ಹಕ್ಕಿ ಜ್ವರ ಚಿಕ್ಕಬಳ್ಳಾಪುರದಲ್ಲಿ ಕಾಲಿಟ್ಟಿರುವ ಭೀತಿ ಶುರುವಾಗಿದೆ.
ಈ ಪಕ್ಷಿಗಳು ಹಲವು ದೇಶಗಳಿಂದ ಇಲ್ಲಿ ವಲಸೆ ಬಂದಿವೆ. ಈ ರೀತಿ ಪಕ್ಷಿಗಳ ಸಾಮೂಹಿಕ ಸಾವು ತಿಳಿದ ಅರಣ್ಯಾಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ಪಕ್ಷಿಗಳ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
PublicNext
07/01/2021 08:18 pm