ಕಲಬುರಗಿ: ಮಲಗಿದ್ದ ಮಹಿಳೆ ಮೇಲೆ ನಾಗರಹಾವು ಹರಿದಾಡಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹೊಲದಲ್ಲಿ ಮಲಗಿದ್ದ ಗ್ರಾಮದ ಭಾಗಮ್ಮ ಬಡದಾಳ್ ಅವರ ಮೈಮೇಲೆ ನಾಗರಹಾವು ಹತ್ತಿ ಕುಳಿತಿದೆ. ಇದು ಭಾಗಮ್ಮ ಅವರ ಅರಿವಿಗೆ ಬಂದ ಕೂಡಲೇ ಕಾಪಾಡು ಶ್ರೀಶೈಲ ಮಲ್ಲಯ್ಯ ಎಂದು ಪ್ರಾರ್ಥಿಸಿದ್ದಾರೆ. ಭಾಗಮ್ಮ ಅವರ ಮೈಮೇಲೆ ಕೆಲಹೊತ್ತು ಇದ್ದ ಹಾವು ಸುತ್ತ ಗಹನವಾಗಿ ನೋಟ ಹರಿಬಿಟ್ಟಿದೆ. ನಂತರ ಅಲ್ಲಿಂದ ಇಳಿದು ಬೇರೆಡೆ ಹೋಗಿದೆ. ಹಾವು ಹೋಗಿದ್ದೇ ತಡ ಬದುಕಿತು ಬಡ ಜೀವ ಎಂಬಂತೆ ಭಾಗಮ್ಮ ನಿಟ್ಟುಸಿರು ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
PublicNext
27/08/2022 02:43 pm