ಸಾವಿನ ಮನೆ ಕದ ತಟ್ಟಿ ವಾಪಸ್ ಬರೋದು ಅಂತಾರರಲ್ಲ. ಅದಕ್ಕೆ ಬೆಸ್ಟ್ ಉದಾಹರಣೆ ಎಂಬಂತೆ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಸಂಜೆ ಹೊತ್ತಿನ ಮಳೆಗೆ ಮುನ್ನ ಭಾರಿ ಗಾಳಿ ಬೀಸಿದೆ. ಆಗ ಮನೆ ಮೇಲಿನ ತಗಡು ಹಾರಿ ಬಂದಿದೆ. ನಿಂತಿದ್ದ ಯುವಕನತ್ತ ಬಂದ ತಗಡು ಇನ್ನೇನು ಆತನ ಕುತ್ತಿಗೆಗೆ ತಾಕಿತು ಎನ್ನುವಷ್ಟರಲ್ಲಿ ಯುವಕ ಕ್ಷಣಾರ್ಧದಲ್ಲಿ ಪಾರಾಗಿದ್ದಾನೆ. ಸ್ಥಳೀಯರೊಬ್ಬರು ಸೆಲ್ಫಿ ವಿಡಿಯೋ ಮಾಡುವಾಗ ಈ ದೃಶ್ಯ ಸೆರೆಯಾಗಿದೆ. ಸೆಲ್ಫಿ ವಿಡಿಯೋ ಮಾಡಿದ ಯುವಕ ಜಸ್ಟ್ ಮಿಸ್ ಎಂದಿದ್ದು ವಿಡಿಯೋದಲ್ಲಿದೆ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು ಎನ್ನಲಾಗಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
10/05/2022 03:46 pm