ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಲ್ಲೊಂದು 'ಮತ್ಸ್ಯ ಪ್ರಿಯ' ಆಡು!: ಕ್ಷಣಾರ್ಧದಲ್ಲಿ ತಟ್ಟೆಯಲ್ಲಿದ್ದ ಹಸಿಮೀನು ಹೊಟ್ಟೆಗೆ

"ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಮಾತು ನಮಗೆಲ್ಲ ತಿಳಿದೇ ಇದೆ. ಇನ್ನು ಮುಂದೆ "ಆಡು ಮುಟ್ಟದ ಆಹಾರವಿಲ್ಲ" ಎಂಬ ನುಡಿಯೂ ಚಾಲ್ತಿಗೆ ಬರಬಹುದು! ಯಾಕೆ ಅಂತೀರಾ... ನಾವೆಲ್ಲ ಹುಬ್ಬೇರಿಸುವಂತಹ ಈ ವೀಡಿಯೊ ನೋಡಿ.

ಹೇಗೆ ಇಷ್ಟಪಟ್ಟು, ಈ ಆಡು ಮಾಂಸಾಹಾರಿ ಪ್ರಾಣಿಗಳಂತೆ ಗಬಗಬನೇ ಮೀನು ತಿನ್ನುತ್ತಿದೆ! ತಟ್ಟೆಯಲ್ಲಿನ ಮೀನನ್ನು ಸೊಪ್ಪಿನಂತೆ ಜಗಿಯುತ್ತಾ ಸ್ವಾಹಾ ಮಾಡುತ್ತಿರುವ ಈ ವೀಡಿಯೊ ಎಲ್ಲಿಯದು ಎಂಬುದು ತಿಳಿದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

Edited By : Manjunath H D
PublicNext

PublicNext

26/09/2021 06:54 pm

Cinque Terre

97.4 K

Cinque Terre

2

ಸಂಬಂಧಿತ ಸುದ್ದಿ