ವರದಿ: ಮನೋಜ್ ಕೆ.ಬೆಂಗ್ರೆ
ಪ್ರಾಣಿ- ಪಕ್ಷಿಗಳ ನಡುವಿನ ಅನ್ಯೋನ್ಯತೆ, ಆತ್ಮೀಯತೆಗೆ ಸಂಬಂಧಿಸಿದ ಹಲವಾರು ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ, ಖುಷಿ ಪಟ್ಟಿದ್ದೇವೆ. ಅದರಲ್ಲೂ ವಿಜಾತೀಯ ಜೀವಿಗಳೆರಡು ಪ್ರೀತಿ- ಸ್ನೇಹದಿಂದ ಇದ್ದು, ಆಹಾರವನ್ನು ಹಂಚಿ ತಿನ್ನುವುದನ್ನು ಕಂಡರೆ ಅಚ್ಚರಿಯ ಜತೆಗೆ ಸೋಜಿಗವಾಗದೇ ಇರದು.
ಅಂತಹದ್ದೇ ಚಿತ್ರಣವಿರುವ ವೀಡಿಯೊ ಇದೀಗ ಸಾಕಷ್ಟು ವೈರಲ್ ಆಗಿದ್ದು, ನೋಡುಗರನ್ನು ಹರ್ಷಚಿತ್ತವಾಗಿಸುತ್ತವೆ.
ಹೌದು, ತನಗಾಗಿ ಹಾಕಿದ ಆಹಾರವನ್ನು ತೆಗೆದುಕೊಂಡು ತನ್ನದೇ ಮರಿಗಳಿಗೆ ತಿನ್ನಿಸುವಂತೆ ಅಷ್ಟೇ ವಾತ್ಸಲ್ಯದಿಂದ ಮೀನುಗಳಿಗೆ
ಉಣಿಸುವ ಬಾತುಕೋಳಿಯೊಂದು, ಮನುಕುಲಕ್ಕೂ ಸಾಮರಸ್ಯದ ಬದುಕಿನ ಪಾಠವನ್ನು ತಿಳಿಸುವಂತಿದೆ.
PublicNext
31/07/2021 09:39 pm