ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಉಕ್ಕಿ ಹರಿಯುತ್ತಿರುವ ತುಂಗಾಭದ್ರ

ದಾವಣಗೆರೆ: ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ಜಲದಿಗ್ಬಂಧನ ಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರ ನದಿ ನೀರು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಉಕ್ಕಡಗಾತ್ರಿಯ ಪವಿತ್ರ ಕ್ಷೇತ್ರ ಕರಿಬಸವೇಶ್ಬರ ದೇವಸ್ಥಾನದ ಸ್ನಾನಗಟ್ಟ, ಪೂಜಾ ಸಾಮಗ್ರಿ ಮಾರಾಟ ಮಾಡುವ ಅಂಗಡಿಗಳು ಮುಳುಗಡೆ ಆಗಿವೆ. 30 ಕ್ಕೂ ಅಧಿಕ ಪೂಜಾ ಸಾಮಾಗ್ರಿ ಅಂಗಡಿಗಳಲ್ಲಿ ನೀರು ತುಂಬಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಗಾಜನೂರಿನ ತುಂಗಾ ಡ್ಯಾಂನಿಂದ 55 ಸಾವುರ ಕ್ಯೂಸೇಕ್ ನೀರು ಹೊರಬಿಡಲಾಗಿದ್ದು, ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ನದಿಗೆ ಇಳಿಯದಂತೆ ಆಡಳಿತ ಮಂಡಳಿ, ಗ್ರಾಮ ಪಂಚಾಯತ್ ಎಚ್ಚರಿಕೆ ನೀಡಿದೆ. ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್, ಮೆದಾರ ಓಣಿ ಮುಳುಗುವ ಆತಂಕ ಎದುರಾಗಿದ್ದು, ನದಿಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Edited By :
PublicNext

PublicNext

09/07/2022 09:17 am

Cinque Terre

157.05 K

Cinque Terre

0