ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ : ಗ್ರಾಮಕ್ಕೆ ನುಗ್ಗಿದ ಮೊಸಳೆ : ಗ್ರಾಮಸ್ಥರಲ್ಲಿ ಆತಂಕ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮಲಫ್ರಭಾ ನದಿ ದಡದ ರಾಮಥಾಳ ಗ್ರಾಮದ ಬಳಿ 6 ಅಡಿ ಉದ್ಧದ ಮೊಸಳೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕವನ್ನು ಸೃಷ್ಟಿಸಿತ್ತು.

ಮಲಫ್ರಭಾ ನದಿ ದಡದಿಂದ ಮೊಸಳೆ ತಡರಾತ್ರಿ ವಿಶ್ವನಾಥ ಎಂಬುವವರ ಹೊಲಕ್ಕೆ ನುಗ್ಗಿ ಆತಂಕ ಹೆಚ್ಚಾಗಿತ್ತು. ಇದರಿಂದ ಗ್ರಾಮಸ್ಥರು ಹಾಗು ಅಕ್ಕಪಕ್ಕದ ಹೊಲ ಗದ್ದೆಗಳಲ್ಲಿದ್ದ ರೈತರು ಮೊಸಳೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಸಳೆಗೆ ಗಾಯವಾಗದಂತೆ ಜನತೆಗೂ ತೊಂದರೆ ಆಗದಂತೆ ಮೊಸಳೆಯನ್ನು ಹಗ್ಗ ಮತ್ತು ಮರಗಳ ನೆರವಿನಿಂದ ಕಟ್ಟಿಹಾಕಲಾಗಿದೆ.

ಸದ್ಯ ಸ್ಥಳಕ್ಕಾಗಮಿಸಿದ ಹುನಗುಂದ ತಾಲೂಕು ಅರಣ್ಯಾಧಿಕಾರಿ ವೀರೇಶ & ಸಿಬ್ಬಂದ ಪರಿಶೀಲನೆ ನಡೆಸಿದರು. ಬೃಹತ್ ಮೊಸಳೆಯನ್ನ ಸುರಕ್ಷಿತ ಸ್ಥಳದಲ್ಲಿ ಬಿಡಲು ಅರಣ್ಯ ಇಲಾಖೆ ಸಕಲ ವ್ಯವಸ್ಥೆಗೆ ಸಜ್ಜಾಗಿತ್ತು.

ಸದ್ಯ ಜನತೆಗೆ ಮೊಸಳೆಯಿಂದ ಯಾವುದೇ ತೊಂದರೆಯಾಗಲ್ಲ ಎನ್ನುವುದೇ ಸಮಾಧಾನದ ವಿಷಯ.

Edited By :
PublicNext

PublicNext

28/04/2022 09:39 am

Cinque Terre

91.17 K

Cinque Terre

3