ಬೆಂಗಳೂರು: ಕಳೆದೊಂದು ವಾರದಿಂದ ಉತ್ತರ ಕರ್ನಾಟಕವನ್ನು ಬಿಟ್ಟುಬಿಡದೇ ಕಾಡ್ತಿದ್ದಾನೆ ವರುಣ.
ಈಶಾನ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮ, ಅರಬ್ಬಿ ಸಮುದ್ರದ ತಟದಲ್ಲಿರುವ ಕರ್ನಾಟಕ ಕರಾವಳಿ ಜಿಲ್ಲೆಗಳ ಮೇಲಾಗಿದೆ.
ಕೇವಲ ಒಂದೇ ಒಂದು ರಾತ್ರಿಯಲ್ಲಿ ಸುರಿದ ಭಾರೀ ಮಳೆಗೆ ಕೃಷ್ಣನೂರು ಉಡುಪಿಯ ಚಿತ್ರಣವೇ ಬದಲಾಗಿದೆ.
ಮಳೆ ಹೊಡೆತಕ್ಕೆ ಸರಿಸುಮಾರು 800ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ. ಕಳೆದ 40 ವರ್ಷಗಳಲ್ಲೇ ಉಡುಪಿ ಜಿಲ್ಲೆ ಇಂತಹ ಸನ್ನಿವೇಶವನ್ನು ಎದುರಿಸಿರಲ್ಲ.
ಎಲ್ಲಿ ನೋಡಿದರಲ್ಲಿ ನೀರು ಕಾಣುತ್ತಿದೆ. ಸಾವಿರಾರು ಮಂದಿಯನ್ನು ಬೋಟ್ ನೆರವಿನಿಂದ ಎನ್ ಡಿಆರ್ ಎಫ್ ರಕ್ಷಣೆ ಮಾಡಿದೆ.
ಕೇವಲ ಉಡುಪಿ ಮಾತ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ ಎಲ್ಲೇಡೆ ಭಾರೀ ಮಳೆಯಾಗುತ್ತಿದೆ.
ಮಹಾ ಮಳೆಗೆ ಕಡೆ ನದಿಗಳು ಉಕ್ಕೇರುತ್ತಿವೆ.
ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಇನ್ನು ಮೂರು ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
PublicNext
20/09/2020 09:54 pm