ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕಾಲುವೆ ಒಡೆದು ಹೊಲಗಳಿಗೆ ನುಗ್ಗಿದ ನೀರು

ಮಳೆ ನೀರು ಹೆಚ್ಚಾದ ಹಿನ್ನಲೆ ಕಾಲುವೆ ಒಡೆದು ಊರೋಳಗೆ ನೀರು ನುಗ್ಗಿದ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ನಡೆದಿದೆ. ರೈತರು ಬೆಳೆದ ಹೊಲಗಳಿಗೂ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸುಮಾರು 30 ಎಕರೆಯಲ್ಲಿ ಬೆಳೆದ ಹಲವಾರು ಬೆಳೆಗಳು ಜಲಾವೃತಗೊಂಡಿವೆ.

ಭತ್ತ, ಮೆಕ್ಕೆಜೋಳ, ಸೋಯಾಬಿನ್ ಹಾಗೂ ಹತ್ತಿ ಹೊಲಗಳಿಗೆ ನೀರು ನುಗ್ಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿ ಬೆಳೆದಿದ್ದ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿವೆ ಇದಲ್ಲದೆ ಮಾಚನಹಳ್ಳಿ, ಬಸವನಕಟ್ಟಿ ಗ್ರಾಮದ ಹಲವು ಮನೆಗಳಿಗೂ ನೀರು ನುಗ್ಗಿದೆ. ಅಧಿಕಾರಗಳ ಅವೈಜ್ಞಾನಿಕ ಕಾಮಗಾರಿಯಿಂದ ಎಡವಟ್ಟಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Edited By :
PublicNext

PublicNext

01/08/2022 07:58 pm

Cinque Terre

62.3 K

Cinque Terre

0